Wednesday, 21 June 2017

ಶ್ರೀಮದ್ ಭಾಗವತಮ್


ಅಧ್ಯಾಯ-4: ನಾರದರ ಆಗಮನ..
ಶ್ಲೋಕ -10
ಅನುವಾದ :-ಆತ ಮಹಾಚಕ್ರವತಿðಯಾಗಿದ್ದು, ತನ್ನ ಸಾಮ್ರಾಜ್ಯದಲ್ಲಿ ಸಕಲೈಶ್ವರ್ಯವನ್ನು ಹೊಂದಿದ್ದನು. ಆತ ಪಾಂಡುವಂಶದ ಕೀರ್ತಿಯನ್ನು ವಿಸ್ತರಿಸುವ ಮಹಾಮಹಿಮನಾಗಿದ್ದನು. ಆದರೂ ಆತ   ಏಕೆ ಇವೆಲ್ಲವನ್ನೂ ತ್ಯಜಿಸಿ ಗಂಗಾನದಿಯ ತೀರದಲ್ಲಿ ಆಮರಣ  ಉಪವಾಸ  ಕುಳಿತನು?

ಭಾವಾರ್ಥ :- ಪರೀಕ್ಷಿತ ಮಹಾರಾಜನು ಭೂಮಿಸಾಗರಗಳೆಲ್ಲಕ್ಕೂ ಒಡೆಯನಾಗಿದ್ದನು. ಆತ ಆ ಮಹಾಸಾಮ್ರಾಜ್ಯವನ್ನು ತನ್ನ ಸ್ವಂತ ಸಾಮರ್ಥ್ಯದಿಂದ ಶ್ರಮವಹಿಸಿ ಪಡೆದಿರಲಿಲ್ಲ; ತನ್ನ ಹಿರಿಯರಾದ ಮಹಾರಾಜ ಯುಧಿಷ್ಠಿರ ಹಾಗೂ ಆತನ ಸೋದರರಿಂದ ಆನುವಂಶಿಕವಾಗಿ ಪಡೆದಿದ್ದನು ಪರೀಕ್ಷಿತ ಮಹಾರಾಜನು ಸಮರ್ಥ  ಆಡಳಿತಗಾರನಾಗಿದ್ದು, ತನ್ನ ಹಿರಿಯರ ಹೆಸರಿಗೆ, ಕೀರ್ತಿಗೆ ತಕ್ಕವನಾಗಿದ್ದನು. ಆತನ ಆಡಳಿತದಲ್ಲಾಗಲೀ ಸಂಪತ್ತಿನಲ್ಲಾಗಲ್ಲೀ ಯಾವ ಕೊರತೆಯೂ ಇರಲಿಲ್ಲ. ಹೀಗಿದ್ದರೂ ಆತ ಇಂತಹ ಅನುಕೂಲಕರ ಪರಿಸರವನ್ನು ಬಿಟ್ಟು ಆಮರಣ ಉಪವಾಸ ಮಾಡಲು ಗಂಗಾನದಿ ತೀರಕ್ಕೆ ಏಕೆ ಹೋಗಿ ಕುಳಿತ? ಇದು ಆಶ್ಯರ್ಯಕರ ವಿಷಯವಾದುದರಿಂದ ಅವರೆಲ್ಲರೂ ಇದರ ಕಾರಣ ತಿಳಿಯಲು ಕುತೂಹಲಿಗಳಾಗಿದ್ದರು.

ಶ್ಲೋಕ -11
ಅನುವಾದ :-ಪರೀಕ್ಷಿತನು ಶ್ರೇಷ್ಠ ಸಾಮ್ರಾಟನಾಗಿದ್ದನು. ಅವನ ಎಲ್ಲ ಶತ್ರುಗಳೂ ಸ್ವಂತ ಹಿತದೃಷ್ಠಿಯಿಂದಲೇ ಆತನ ಬಳಿಬಂದು ತಮ್ಮ ಸಕಲ ಸಂಪತ್ತನ್ನು ಆತನ ಪಾದಗಳಿಗೆ ಒಪ್ಪಿಸಿ ನಮಸ್ಕರಿಸುತ್ತಿದ್ದರು. ಆತ   ದೃಢಕಾಯನಾದ ತರುಣನೂ ಬಲಶಾಲಿಯೂ ಆಗಿದ್ದನು. ಆತನ ಬಳಿ ಅಪಾರ ಐಶ್ವರ್ಯವಿದ್ದಿತು. ಹೀಗಿದ್ದರೂ ಆತ ಏಕೆ ಎಲ್ಲವನ್ನೂ, ತನ್ನ ಪ್ರಾಣವನ್ನೂ ತ್ಯಜಿಸಲು ಸಿದ್ದನಾದನು?

ಭಾವಾರ್ಥ :-ಆತನ ಜೀವನದಲ್ಲಿ ಅಹಿತವಾದುದು ಯಾವುದೂ ಇರಲಿಲ್ಲ. ಆತ ತರುಣನಾಗಿದ್ದ. ಅಧಿಕಾರ ಹಾಗೂ ಸಂಪತ್ತನ್ನು ಸಂತೋಷವಾಗಿ ಅನುಭವಿಸಬಲ್ಲವನಾಗಿದ್ದ. ಹೀಗಾಗಿ ಆತ ಕ್ರಿಯಾಶೀಲ ಬದುಕಿನಿಂದ ನಿವೃತ್ತನಾಗುವ ಅಗತ್ಯವಿರಲಿಲ್ಲ. ಶತ್ರುರಾಜರೇ ಆತನ ಬಳಿಬಂದು ತಮ್ಮ ಹಿತಕ್ಕೋಸ್ಕರ ಸಂಪತ್ತೆಲ್ಲವನ್ನು ಸಮರ್ಪಿಸುತ್ತಿದ್ದರು. ಎಂದರೆ ಆತನ ರಾಜ್ಯದಲ್ಲಿ ತೆರಿಗೆ ಸಂಗ್ರಹ ಏನೇನೂ ತೊಂದರೆಯೆನ್ನಿಸಿರಲಿಲ್ಲ. ಪರೀಕ್ಷಿತನು  ಧರ್ಮಿಷ್ಠರಾಜನಾಗಿದ್ದ. ತನ್ನೆಲ್ಲ ಶತ್ರುಗಳನ್ನು ಜಯಿಸಿದ್ದ.ಆದ್ದರಿಂದ ಆತನ ಸಾಮ್ರಾಜ್ಯ ಸಂಪದ್ಬರಿತನಾಗಿದ್ದಿತು. ಹಾಲು, ಧಾನ್ಯ,ಲೋಹ ಎಲ್ಲವೂ ಸಮೃದ್ದವಾಗಿದ್ದು ಹೂಳೆ,ಹಳ್ಳ,ಗಿರಿಗಳು ತುಂಬಿದ್ದವು. ಹೀಗೆ ಭೌತಿಕವಾಗಿ ಎಲ್ಲವು ತೃಪ್ತಿಕರವಾವಾಗಿದ್ದಿತು. ಆದ್ದರಿಂದ ಆತನಿಗೆ ಅಕಾಲಿಕವಾಗಿ ತನ್ನ ರಾಜ್ಯವನ್ನೂ, ಪ್ರಾಣವನ್ನೂ ತ್ಯಾಗಮಾಡುವ ಅಗತ್ಯವಿರಲಿಲ್ಲ. ಋಷಿಗಳು ಈ ಎಲ್ಲದರ ಬಗ್ಗೆ ಕೇಳಲು ಕಾತರರಾಗಿದ್ದರು.

No comments:

Post a Comment