Friday, 9 June 2017

ಶ್ರೀಮದ್ಭಾಗವತಮ್


ಅಧ್ಯಾಯ-೩: ಸಕಲಾವತಾರಗಳಿಗೆ ಆದಿಮೂಲನಾದ ಕೃಷ್ಣ…

ಶ್ರೀಮದ್ಭಾಗವತಮ್ ೧.೩.೩೯: ಈ ಲೋಕದಲ್ಲಿ ಇಂತಹಾ ಜಿಜ್ಞಾಸೆ ನಡೆಸುವುದರಿಂದ ಮಾತ್ರ ವ್ಯಕ್ತಿಯು ಸಫಲನೂ, ಪರಿಪೂರ್ಣ ಅರಿವುಳ್ಳವನೂ ಆಗಬಲ್ಲನು. ಏಕೆಂದರೆ ಅಂತಹ ಜಿಜ್ಞಾಸೆಗಳು ಭಗವಂತನ ಬಗ್ಗೆ ದಿವ್ಯವಾದ ಪ್ರೇಮೋತ್ಕರ್ಷವನ್ನು ಉಂಟುಮಾಡುತ್ತವೆ. ಸಕಲ ಲೋಕ ನಾಯಕನಾದ ಭಗವಂತನು ಅಂತಹ ಜಿಜ್ಞಾಸುಗಳಿಗೆ ಉಗ್ರವಾದ ಜನನ ಮರಣ ಚಕ್ರದಿಂದ ನೂರಕ್ಕೆ ನೂರರಷ್ಟು ರಕ್ಷಣೆಯನ್ನು ಖಂಡಿತವಾಗಿ ನೀಡುತ್ತಾನೆ. 

ಭಾವಾರ್ಥ: ಶೌನಕರ ನಾಯಕತ್ವದಲ್ಲಿ ಋಷಿಗಳು ನಡೆಸಿದ ಜಿಜ್ಞಾಸೆಗಳನ್ನು ಅವುಗಳ ದಿವ್ಯಲಕ್ಷಣದ ಆಧಾರದ ಮೇಲೆ ಸೂತಮುನಿಗಳು ಇಲ್ಲಿ ಪ್ರಶಂಸಿಸಿದ್ದಾರೆ. ಈಗಾಗಲೇ ಸಿದ್ಧಾಂತರೂಪದಲ್ಲಿ ಹೇಳಿದಂತೆ ಭಗವಂತನ ಭಕ್ತರು ಮಾತ್ರ ಅವನನ್ನು ತಕ್ಕಮಟ್ಟಿಗೆ ಅರ್ಥಮಾಡಿಕೊಳ್ಳಬಲ್ಲರು. ಬೇರೆ ಯಾರೂ ಅವನನ್ನು ಅರ್ಥಮಾಡಿಕೊಳ್ಳಲಾರರು. ಆದುದರಿಂದ ಭಕ್ತರು ಮಾತ್ರ ಸಕಲ ದಿವ್ಯ ಜ್ಞಾನವನ್ನು ಪರಿಪೂರ್ಣವಾಗಿ ಅರಿಯುವಂತಹವರಾಗಿದ್ದಾರೆ. ಪರಾತ್ಪರ ವಿಷಯದಲ್ಲಿ ದೇವೋತ್ತಮ ಪರಮ ಪುರುಷನೇ ಕೊನೆಯ ಮಾತಾಗಿದ್ದಾನೆ. ನಿರಾಕಾರ ಬ್ರಹ್ಮ ಮತ್ತು ಅಂತರ್ಮಿಯಾದ ಪರಮಾತ್ಮ ಈ ಎರಡು ಲಕ್ಷಣಗಳು ದೇವೋತ್ತಮ ಪರಮ ಪುರುಷನ ಜ್ಞಾನದಲ್ಲಿ ಒಂದಾಗಿದೆ. ಆದುದರಿಂದ ದೇವೋತ್ತಮ ಪರಮ ಪುರುಷನನ್ನು ಯಾರು ಅರ್ಥಮಾಡಿಕೊಳ್ಳುತ್ತಾರೋ ಅವರಿಗೆ ಆತನ ಎಲ್ಲ ವಿಷಯಗಳೂ ತಮಗೆ ತಾವೇ ಅರ್ಥವಾಗುತ್ತವೆ. ಆತನ ಅನಂತ ಶಕ್ತಿಗಳು, ವಿಸ್ತೃತರೂಪಗಳು, ಎಲ್ಲವೂ ಅರ್ಥವಾಗುತ್ತವೆ. ಆದುದರಿಂದ ಅಂತಹ ಭಕ್ತರು ಸರ್ವಸಲರೆಂದು ಅಭಿನಂದಿತರಾಗುತ್ತಾರೆ. ನೂರಕ್ಕೆ ನೂರು ಭಗವಂತನ ಭಕ್ತನಾಗಿರುವವನು ಪುನರಾವರ್ತಿತವಾಗುವ ಜನನ ಮರಣಗಳ ಭಯಂಕರವಾದ ಐಹಿಕ ಕ್ಲೇಶಗಳಿಂದ ಅಬಾಧಿತನಾಗಿರುತ್ತಾನೆ. 

ಶ್ರೀಮದ್ಭಾಗವತಮ್ ೧.೩.೪೦: ಶ್ರೀಮದ್ಭಾಗವತವು ಭಗವಂತನ ಸಾಹಿತ್ಯಕ ಅವತಾರ. ಭಗವದವತಾರವಾದ ಶೀಲ ವ್ಯಾಸದೇವರು ಇದರ ಕರ್ತೃ. ಇದು ಎಲ್ಲ ಜನರ ಆತ್ಯಂತಿಕ ಒಳಿತಿಗಾಗಿ ರಚಿತವಾಗಿದೆ. ಇದು ಪರಮಧನ್ಯವೂ, ಸಕಲಾನಂದಪ್ರದವೂ ಮತ್ತು ಸರ್ವಪರಿಪೂರ್ಣವೂ ಆದ ಕೃತಿಯಾಗಿದೆ. 

ಭಾವಾರ್ಥ: ಶ್ರೀಮದ್ಭಾಗವತವು ವೈದಿಕಜ್ಞಾನ ಮತ್ತು ಚರಿತ್ರೆಯ ನಿರ್ಮಲವಾದ ಶಾಬ್ದಿಕ ಅಭಿವ್ಯಕ್ತಿಯಾಗಿದೆ ಎಂಬುದಾಗಿ ಶ್ರೀ ಚೈತನ್ಯ ಮಹಾಪ್ರಭುಗಳು ಘೋಷಿಸಿದ್ದಾರೆ. ಈ ಕೃತಿಯಲ್ಲಿ ದೇವೋತ್ತಮ ಪರಮ ಪುರುಷನ ನೇರ ಸಂಪರ್ಕದಲ್ಲಿದ್ದ ಮಹಾದೈವ‘ಕ್ತರ ಆಯ್ದ ಜೀವನ ಚರಿತ್ರೆಗಳಿವೆ. ಶ್ರೀಮದ್ಭಾಗವತವು ಭಗವಾನ್ ಶ್ರೀ ಕೃಷ್ಣನ ಸಾಹಿತ್ಯಕ ಅವತಾರವಾಗಿದೆ. ಆದುದರಿಂದ ಇದು ಅವನಿಂದ ಅಭಿನ್ನ ಎನ್ನಬಹುದು. ನಾವು ಭಗವಂತನನ್ನು ಎಷ್ಟು ಗೌರವದಿಂದ ಪೂಜಿಸುತ್ತೇವೋ ಅಷ್ಟೇ ಗೌರವದಿಂದ ಶ್ರೀಮದ್ಭಾಗವತವನ್ನೂ ಪೂಜಿಸಬೇಕು. ಇದರ ಸೂಕ್ಷ್ಮ ಮತ್ತು ಸಾವಧಾನವಾದ ಅಧ್ಯಾಯನದಿಂದ ನಾವು ಭಗವಂತನ ಅತಿಶಯವಾದ ಆಶೀರ್ವಾದಗಳನ್ನು ಪಡೆಯಬಹುದು. ಭಗವಂತನು ಸರ್ವಪ್ರಕಾಶನೂ, ಸಕಲಾನಂದನೂ ಮತ್ತು ಸರ್ವಪರಿಪೂರ್ಣನೂ ಆದುದರಿಂದ ಶ್ರೀಮದ್ಭಾಗವತಕ್ಕೂ ಆ ಎಲ್ಲ ಲಕ್ಷಣಗಳಿವೆ. ನಾವು ಪರಬ್ರಹ್ಮನಾದ ಶ್ರೀಕೃಷ್ಣನ ಸಕಲ ದಿವ್ಯ ಪ್ರಕಾಶವನ್ನು ಶ್ರೀಮದ್ಭಾಗವತದ ಪಠಣದಿಂದ ಪಡೆಯಬಹುದು. ಆದರೆ ಇಂತಹ ಪಠಣವು ನಿರ್ಮಲ ಗುರುಗಳ ಮೂಲಕ ನಡೆಯಬೇಕು ಎಂಬುದು ಮಾತ್ರ ಮುಖ್ಯವಾದ ಮಾತು. ಚೈತನ್ಯ ಮಹಾಪ್ರಭುಗಳ ಆಪ್ತ ಕಾರ್ಯದರ್ಶಿಯಾಗಿದ್ದ ಶ್ರೀಲ ಸ್ವರೂಪ ದಾಮೋದರ ಗೋಸ್ವಾಮಿಯವರು ಜಗನ್ನಾಥ ಪುರಿಯಲ್ಲಿ ಪ್ರಭು ಚೈತನ್ಯರನ್ನು ಕಾಣಲು ಬರುತ್ತಿದ್ದ ಸಂದರ್ಶಕರಿಗೆ  ಭಾಗವತವನ್ನು ಭಾಗವತರ ಮೂಲಕ ಅಭ್ಯಾಸ ಮಾಡುವಂತೆ ಉಪದೇಶಿಸುತ್ತಿದ್ದರು. ಭಾಗವತನು ಆತ್ಮ ಸಾಕ್ಷಾತ್ಕಾರ  ಪಡೆದ ನಿಜವಾದ ಆಧ್ಯಾತ್ಮಿಕ ಗುರು. ಅಂತಹವನಿಂದ ಮಾತ್ರ ಭಾಗವತವನ್ನು ವ್ಯಕ್ತಿಯು ನಿಜವಾಗಿ ಅರ್ಥಮಾಡಿಕೊಳ್ಳಬಲ್ಲ ಹಾಗೂ ಇಚ್ಛಿತ ಫಲಗಳನ್ನು ಪಡೆಯಬಲ್ಲ. ಭಗವಂತನ ಕ್ಷಾತ್ ಸನ್ನಿಧಿಯಿಂದ ಏನೆಲ್ಲ ಅನುಕೂಲಗಳನ್ನು ಪಡೆಯುವುದು ಸಾಧ್ಯವಿದೆಯೋ ಅದೆಲ್ಲವನ್ನೂ ಭಾಗವತದ ಅಧ್ಯಾಯನದಿಂದ ವ್ಯಕ್ತಿಯು ಪಡೆಯಲು ಸಾಧ್ಯ. ಭಗವಾನ್ ಶ್ರೀಕೃಷ್ಣನ ನೇರ ಸಂಪರ್ಕದಿಂದ ನಾವು ಯಾವ ಯಾವ ದಿವ್ಯಾನುಗ್ರಹಗಳನ್ನು ಪಡೆಯಬಹುದೋ ಅದೆಲ್ಲವನ್ನೂ ಭಾಗವತ ಕೃತಿಯಿಂದ ಪಡೆಯಬಹುದು.

No comments:

Post a Comment