Friday, 16 June 2017

ಶ್ರೀಮದ್ಭಾವತಮ್


ಅಧ್ಯಾಯ-4: ನಾರದರ ಆಗಮನ..

ಶ್ರೀಮದ್ಭಾವತಮ್ ೧.೪.೨ :  ಶೌನಕರು ಹೇಳಿದರು- ಎಲೈ ಸೂತಮುನಿಗಳೇ, ಪ್ರವಚನಕಾರರಲ್ಲೇಲ್ಲ ನೀವು ಅತ್ಯಂತ ಭಾಗ್ಯಶಾಲಿಗಳು ಮತ್ತು ಗೌರವಾನ್ವಿತರು. ಶ್ರೇಷ್ಷರೂ ಹಾಗಾ ಶಕ್ತಿ ಸಂಪನ್ನರೂ ಆದ ಶುಕಮುನಿಗಳು ಹೇಳಿದ ಶ್ರೀಮದ್ಬಾಗನತದ ಪುಣ್ಯ ಸಂದೆಶವನ್ನು ನೀವು ದಯವಿಟ್ಟು ನಮಗೆ ತಿಳಿಸಿರಿ

ಭಾವಾಥð: ಶುಕಮುನಿಗಳು ಹೇಳಿದ್ದ ಭಾಗವತವನ್ನು ಕೇಳಲು ಶೌನಕಮುನಿಗಳು ಹಾಗೂ ಸಭಾಸದರು ಉತ್ಸುಕರಾಗಿದ್ದರು. ಹೀಗಾಗಿ ಸೂತಮುನಿಗಳನ್ನು ಶೌನಕರು ಹೇಚ್ಚು ಸಂತೋಷದಿಂದ ಎರಡು ಸಲ ಉದ್ದೇಶಿಸಿ ಹೇಳಿದರು.ತಮ್ಮ ಉದ್ದೇಶಕ್ಕೆ ತಕ್ಕಂತೆ ತಮ್ಮದೇ ಆದ ರೀತಿಯಲ್ಲಿ ಭಾಗವತವನ್ನು  ವ್ಯಾಖ್ಯಾನಿಸುವ ಮೋಸದ ವ್ಯಕ್ತಿಗಳಿಂದ ಪ್ರವಚನ ಕೇಳಲು ಅವರು ಯಾರೂ ಸಿದ್ದರಿರಲಿಲ್ಲ. ಸಾಮಾನ್ಯವಾಗಿ ಭಾಗವತ ಪ್ರವಚನಕಾರರೆನಿಸಿಕೊಂಡವರೆಲ್ಲ ವೃತ್ತಿನಿರತ ಪ್ರವಚನಕಾರರು ಅಥವಾ ಭಗವಂತನ ದಿವ್ಯ ಲೀಲೆಯನ್ನು ಅರ್ಥಮಾಡಿಕೊಳ್ಳದ, ಅದರಲ್ಲಿ ಪ್ರವೇಶ ಪಡೆಯದ ಅದ್ವ್ಯೇತವಾದಿ ಙ್ಞಾನಿಗಳು. ಅಂತಹ ಅದ್ವ್ಯೇತವಾದಿ ಙ್ಞಾನಿಗಳು ಭಾಗವತವನ್ನು ತಮ್ಮ ಮಾಯಾವಾದಿ ನಿಲುವುಗಳಿಗೆ ತಕ್ಕಂತೆ ತಿರುಚಿ ಹೇಳುತ್ತಾರೆ. ವೃತ್ತಿ ನಿರತ ಪ್ರವಚನಕಾರರು ಭಗವಂತನ ಲೀಲೆಯ ತೀರ ವ್ಯಯಕ್ತಿಕವಾದ ಭಾಗವನ್ನು ತಪ್ಪಾಗಿ ವಿವರಿಸಲು ನೇರವಾಗಿ ಹತ್ತನೇ ಸ್ಕಂದಕ್ಕೇ ಧಾವಿಸಿಬಿಡುತ್ತಾರೆ. ಇವರಿಬ್ಬರೂ ಭಾಗವತ ಪ್ರವಚನಕ್ಕೆ ಯೋಗ್ಯರಾದವರಲ್ಲ. ಶುಕಮುನಿಗಳ ಪ್ರವಚನದ ಬೆಳಕಿನಲ್ಲಿ ಭಾಗವತವನ್ನು ವ್ಯಾಖ್ಯಾನಿಸಬಲ್ಲಂಥವರು ಮತ್ತು ಶುಕಮುನಿಗಳು ಹಾಗೂ ಅವರ ಪ್ರತಿನಿದಿಗಳನ್ನು ಆಲಿಸಲು ಸಿದ್ದರಿರುವಂತಹವರು ಮಾತ್ರ ಶ್ರೀಮದ್ಬಾಗವತದ ದಿವ್ಯ ಸಂವಾದದಲ್ಲಿ ನಿಜವಾಗಿ ಪಾಲ್ಗೊಳ್ಳಬಲ್ಲ ಸಮಥðರು.
                                        
ಶ್ರೀಮದ್ಭಾವತಮ್ ೧.೪.೩ :  ಈ ಭಾಗವತವು ಯಾವ ಕಾಲದಲಿ ಮತ್ತು ಯಾವ ಸ್ಥಳದಲ್ಲಿ ಮೊದಲು ಆರಂಭವಾಯಿತು? ಇದನ್ನು ಏಕೆ ತೆಗೆದುಕೊಳ್ಳಲಾಯಿತು? ಶ್ರೇಷ್ಠ ಮುನಿಗಳಾದ ಕೃಷ್ಣದ್ವ್ಯೆಪಾಯನ ವ್ಯಾಸರು ಈ ಸಾಹಿತ್ಯರಚಿಸಲು ಎಲ್ಲಿಂದ ಪ್ರೇರಣೆ ಪಡೆದರು ?

ಭಾವಾರ್ಥ :- ಶ್ರೀಮದ್ಗಾಗವತವು ವೇದವ್ಯಾಸರ ವಿಶೇಷ ಕೊಡುಗೆಯಾದ್ದರಿಂದ, ವಿದ್ವಾಂಸರಾದ ಶೌನಕಮುನಿಗಳು ಇದನ್ನು ಕುರಿತು ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಈಗಾಗಲೇ ವೇದವ್ಯಾಸರು ವೇದಗಳನ್ನು ಮಹಾಭಾರತದವರೆಗೆ ಅಲ್ಪಬುದ್ದಿಯ ಸ್ತ್ರೀಯರಿಗೆ, ಶೂದ್ರರಿಗೆ ಹಾಗೂ ಕೆಳಮಟ್ಟದ ದ್ವಿಜರಿಗೆ ತಿಳಿಯುವಂತೆ ಅನೇಕ ರೀತಿಯಲ್ಲಿ ವಿವರಿಸಿದ್ದಾರೆ ಎಂಬುದು ಅವರಿಗೆ ಗೊತ್ತಿತ್ತು. ಶ್ರೀಮದ್ಗಾಗವತವು  ಐಹಿಕವಾದ ಯಾವುದನ್ನೂ ಒಳಗೋಂಡಿಲ್ಲ.ಆದ್ದರಿಂದ ಅವರಿಗೆಲ್ಲ ಇದು ದಿವ್ಯವಾದುದೂ ಆಧ್ಯಾತ್ಮಿಕವಾದುದೂ ಆಗಿದೆ. ಹೀಗಾಗಿ ಇದನ್ನು ಕುರಿತ ಪ್ರಶ್ನೆಗಳು ಬುದಿವಂತಿಕೆಯಿಂದ ಕೂಡಿದಂತಹವೂ ಪ್ರಸ್ತುತವೂ ಆಗಿದ್ದವು.

No comments:

Post a Comment