Thursday, 22 June 2017

ಭಗವದ್ಗೀತೆ ಯಥಾರೂಪ* *ಅಧ್ಯಾಯ - 5* _*ಕರ್ಮ ಸಂನ್ಯಾಸ ಯೋಗ-ಕೃಷ್ಣ ಪ್ರಜ್ಞೆಯಲ್ಲಿ ಕಾರ್ಯ*, ಶ್ಲೋಕ - 017

*ತದ್ ಬುದ್ಧಯಸ್ತದಾತ್ಮಾನಃ*
*ತನ್ನಿಷ್ಠಾಸ್ತತ್ ಪರಾಯಣಾಃ ।*
*ಗಚ್ಛಂತ್ಯ ಪುನರಾವೃತ್ತಿಂ*
*ಜ್ಞಾನನಿರ್ಧೂತಕಲ್ಮಷಾಃ ॥೧೭॥*

ಮನುಷ್ಯನ ಬುದ್ಧಿ, ಮನಸ್ಸು, ಶ್ರದ್ದೆ ಮತ್ತು ಆಶ್ರಯ ಎಲ್ಲವೂ ಪರಮ ಪ್ರಭುವಿನಲ್ಲಿ ನೆಲೆನಿಂತಾಗ ಪೂಣ೯ ಜ್ಞಾನವು ಆತನ ಸಂಶಯಗಳೆಲ್ಲವನ್ನೂ ತೊಳೆದು ಅವನನ್ನು ಪರಿಶುದ್ಧನನ್ನಾಗಿ ಮಾಡುತ್ತದೆ. ಹೀಗೆ ಆತನು ಮುಕ್ತಿಮಾಗ೯ದಲ್ಲಿ ನೇರವಾಗಿ ಮುನ್ನಡೆಯುತ್ತಾನೆ.

No comments:

Post a Comment