Wednesday, 8 March 2017

Kannada Nityam Bhagavata Sevaya: ಅಧ್ಯಾಯ-೧: ಋಷಿಗಳ ಪ್ರಶ್ನೆ …

ಅಂತಿಮವಾಗಿ ಎಲ್ಲದರ ಮೂಲ ಆಕರವೂ ಪರಮ ಪರಿಪೂರ್ಣನಾದ ಪರಾತ್ಪರ ಅಥವಾ ಬ್ರಹ್ಮನ್ ಆಗಿದೆ ಎಂದು ಶೃತಿಮಂತ್ರದಲ್ಲಿ ಹೇಳಲಾಗಿದೆ. ಎಲ್ಲವೂ ಅವನಿಂದಲೇ ಉದ್ಗಮಿಸುತ್ತವೆ. ಅವನಿಂದಲೇ ಎಲ್ಲವೂ ಪಾಲಿಸಲ್ಪಡುತ್ತವೆ ಮತ್ತು ಕೊನೆಯಲ್ಲಿ ಎಲ್ಲವೂ ಅವನಲ್ಲೇ ಅಂತರ್ಗತವಾಗುತ್ತವೆ. ಅದೇ ಪ್ರಕೃತಿಯ ನಿಯಮ. ಸ್ಮತಿ ಮಂತ್ರದಲ್ಲೂ ಇದನ್ನೇ ದೃಢಪಡಿಸಲಾಗಿದೆ. ಕಲ್ಪದ ಆದಿಯಲ್ಲಿ ಯಾವ ಮೂಲ ಆಕರದಿಂದ ಎಲ್ಲವೂ ಉಗಮಿಸುವುವೋ ಹಾಗೂ ಅಂತಿಮವಾಗಿ ಎಲ್ಲವೂ ಯಾವ ಭಂಡಾರದಲ್ಲಿ ಅಂತರ್ಗತವಾಗುವುವೋ ಅದೇ ಪರಮ ಸತ್ಯ ಅಥವಾ ಬ್ರಹ್ಮನ್ ಎಂದು ಹೇಳಲಾಗಿದೆ. ಭೌತ ವಿಜ್ಞಾನಿಗಳು ಗ್ರಹಮಂಡಲ ವ್ಯವಸ್ಥೆಯ ಅಂತಿಮ ಮೂಲ ಆಕರ ಸೂರ್ಯನೇ ಎಂದು ಭಾವಿಸಿದ್ದಾರೆ. ಆದರೆ ಸೂರ್ಯನ ಮೂಲ ಹೇಳಲು ಅವರು ಅಸಮರ್ಥರು. ಇಲ್ಲಿ ಅಂತಿಮ ಮೂಲ ಆಕರವನ್ನು ವಿವರಿಸಲಾಗಿದೆ. ವೇದಸಾಹಿತ್ಯದ ಪ್ರಕಾರ, ಸೂರ್ಯನಿಗೆ ಹೋಲಿಸಬಹುದಾದ ಬ್ರಹ್ಮದೇವನೇ ಅಂತಿಮ ಸೃಷ್ಟಿಕರ್ತನಲ್ಲ. ಬ್ರಹ್ಮನಿಗೆ ಪರಮ ಪುರುಷನಿಂದ ವೇದಜ್ಞಾನದ ಬೋಧೆಯಾಯಿತೆಂದು ಈ ಶ್ಲೋಕದಲ್ಲಿ ಹೇಳಲಾಗಿದೆ. ಬ್ರಹ್ಮನೇ ಮೂಲ ಜೀವಿಯಾಗಿದ್ದು ಆ ಕಾಲದಲ್ಲಿ ಬೇರಾವ ಜೀವಿಯೂ ಅಸ್ಥಿತ್ವದಲ್ಲಿ ಇರಲಿಲ್ಲವಾದ್ದರಿಂದ ಅವನಿಗೆ ಬೇರೆ ಮೂಲಗಳಿಂದ ಪ್ರೇರಣೆ, ಸ್ಪೂರ್ತಿಗಳು ಒದಗಿಬರುವ ಸಂಭವ ಇಲ್ಲ ಎಂದು ತರ್ಕ ಮಾಡಬಹುದು. ಆನುಷಂಗಿಕವಾಗಿ ಸೃಷ್ಟಿಕರ್ತನಾದ ಬ್ರಹ್ಮನು ತನ್ನ ಆ ಸೃಷ್ಟಿ ಕಾರ್ಯವನ್ನು ನಿರ್ವಹಿಸಲು ಸಾಧ್ಯಾವಾಗುವಂತೆ ಪರಮ ಪುರುಷನೇ ಬ್ರಹ್ಮನಿಗೆ ಸ್ಫೂರ್ತಿ, ಪ್ರೇರಣೆ ನೀಡಿದನೆಂದು ಈ ಶ್ಲೋಕದಲ್ಲಿ ಹೇಳಲಾಗಿದೆ. ಆದ್ದರಿಂದ ಸಕಲ ಸೃಷ್ಟಿಯ ಹಿಂದಿರುವ ಮಹಾನ್ ಮೇಧಾ ಶಕ್ತಿಯು ಪರಾತ್ಪರನಾದ ಶ್ರೀ ಕೃಷ್ಣನೇ. ಬೌತ ದ್ರವ್ಯವನ್ನೊಳಗೊಂಡ ಪ್ರಕೃತಿ ಎಂಬ ಸೃಜನ ಶಕ್ತಿಯ ಮೇಲ್ವಿಚಾರಣೆ ನಡೆಸುವವನು ತಾನೇ ಎಂದು ಭಗವಾನ್ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಆದ್ದರಿಂದಲೇ ಶ್ರೀ ವೇದವ್ಯಾಸರು, ಸೃಷ್ಟಿ ಕ್ರಿಯೆಯಲ್ಲಿ ಬ್ರಹ್ಮನಿಗೆ ಮಾರ್ಗದರ್ಶನ ನೀಡುವ ಶ್ರೀ ಕೃಷ್ಣನನ್ನು ಆರಾಧಿಸುತ್ತಾರೆಯೇ ವಿನಾ ಬ್ರಹ್ಮದೇವನನ್ನಲ್ಲ. ಈ ಶ್ಲೋಕದಲ್ಲಿ ವಿಶೇಷವಾಗಿ ಅಭಿಜ್ಞ ಮತ್ತು ಸ್ವರಾಟ್ ಪದಗಳು ತುಂಬಾ ಮಹತ್ವಪೂರ್ಣವಾದವು. ಈ ಎರಡು ಪದಗಳು ಪರಮ ಪುರುಷ ಶ್ರೀ ಕೃಷ್ಣನು ಉಳಿದೆಲ್ಲಾ ಜೀವರಾಶಿಗಳಿಗಿಂತ ಹೇಗೆ ಭಿನ್ನ ಮತ್ತು ಶ್ರೇಷ್ಟ ಎಂಬುದನ್ನು ಸೂಚಿಸುತ್ತವೆ. ಬೇರಾವ ಜೀವಿಯೂ ಅಭಿಜ್ಞನೂ ಅಲ್ಲ ಸ್ವರಾಟನೂ ಅಲ್ಲ. ಅಂದರೆ ಶ್ರೀ ಕೃಷ್ಣ ಹೊರತು ಬೇರೆ ಯಾರೂ ಪೂರ್ಣ ಅಭಿಜ್ಞನಲ್ಲ; ಪೂರ್ಣ ಸ್ವತಂತ್ರನೂ ಅಲ್ಲ. ಬ್ರಹ್ಮನೂ ಕೂಡಾ ಸೃಷ್ಟಿಸಲು ದೇವೋತ್ತಮ ಪರಮನನ್ನು ಧ್ಯಾನಿಸಬೇಕು. ಹೀಗಿರುವಾಗ ಐನ್‌ಸ್ಟೀನ್ ನಂತಹಾ ಮಹಾ ವಿಜ್ಞಾನಿಗಳ ಬಗೆಗೆ ಹೇಳುವುದೇನಿದೆ! ಇಂತಹಾ ವಿಜ್ಞಾನಿಗಳ ಮೇಧಾಶಕ್ತಿ, ಬುದ್ಧಿಶಕ್ತಿಗಳೂ ಖಂಡಿತವಾಗಿಯೂ ಮನವ ನಿರ್ಮಿತವಲ್ಲ. ವಿಜ್ಞಾನಿಗಳಿಂದಲೇ ಇಂತಹ ಮಿದುಳಿನ ಸೃಷ್ಟಿ ಸಾಧ್ಯಾವಿಲ್ಲ ಎಂದಾಗ ಭಗವಂತನ ಅಧಿಕಾರವನ್ನು ಉಲ್ಲಂಘಿಸುವ ಮೂರ್ಖಶಿಖಾಮಣಿಗಳಾದ ನಾಸ್ತಿಕರ ಬಗ್ಗೆ ಹೇಳುವುದೇನಿದೆ? ಭಗವಂತನೊಂದಿಗೆ ತಾವು ಐಕ್ಯ ಹೊಂದುವುದಾಗಿ ಆತ್ಮಪ್ರಶಂಸೆಮಾಡಿಕೊಳ್ಳುವ ಮಾಯಾವಾದಿಗಳೂ ಅಭಿಜ್ಞರಲ್ಲ ಅಥವಾ ಸ್ವರಾಟರಲ್ಲ. ಇಂತಹ ಮಾಯಾವಾದಿಗಳೂ ಭಗವಂತನಲ್ಲಿ ಐಕ್ಯಹೊಂದುವುದಕ್ಕಾಗಿ ಜ್ಞಾನಸಂಪಾದಿಸಲು ಕಠೋರ ವೃತಗಳನ್ನು ಆಚರಿಸುತ್ತಾರೆ. ಆದರೆ ಇಂತಹವರು ಅಂತಿಮವಾಗಿ ಮಠ ಮಂದಿರಗಳ ನಿರ್ಮಾಣಕ್ಕೆ ಅಗತ್ಯವಾದ ಹಣವನ್ನು ಒದಗಿಸುವ ಯಾರಾದರೊಬ್ಬ ಶ್ರೀಮಂತನ ಅವಲಂಬಿಗಳಾಗುತ್ತಾರೆ. ರಾವಣ ಅಥವಾ ಹಿರಣ್ಯಕಶಿಪುವಿನಂತಹಾ ನಾಸ್ತಿಕರೂ ದೇವಾಧಿದೇವನ ಅಧಿಕಾರವನ್ನು ಉಲ್ಲಂಘಿಸುವ ಮುನ್ನ ವ್ರತ, ತಪಸ್ಸು ಮೊದಲಾದ ಸಂಸ್ಕಾರಗಳನ್ನು ಆಚರಿಸಬೇಕಾಯಿತು. ಆದರೆ, ಕೊನೆಯಲ್ಲಿ ಭಗವಂತನು ಕರಾಳ ಮೃತ್ಯರೂಪದಲ್ಲಿ ಪ್ರತ್ಯಕ್ಷನಾದಾಗ ಅವರು ಅಸಹಾಯಕರಾದರು. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಸಮರ್ಥರಾದರು. ದೇವರ ಅಧಿಕಾರವನ್ನು ಉಲ್ಲಂಘಿಸಲು ಯತ್ನಿಸುವ ಆಧುನಿಕ ನಾಸ್ತಿಕರ ಹಣೆಯ ಬರಹವೂ ಇದೇ ಆಗಿದೆ. ಇತಿಹಾಸ ಪುನರಾವರ್ತನೆಗೊಳ್ಳುವುದರಿಂದ ಆಧುನಿಕ ನಾಸ್ತಿಕರಿಗೂ ಇದೇ ಗತಿ ಒದಗುವುದು. ಮನುಷ್ಯನು ಭಗವಂತನ ಅಧಿಕಾರವನ್ನು ಉಪೇಕ್ಷಿಸಿದಾಗಲೆಲ್ಲಾ ಅನನ್ನು ದಂಡಿಸಲು ಪ್ರಕೃತಿಯಿದೆ ಹಾಗೂ ಪ್ರಕೃತಿಯ ನಿಯಮಗಳಿವೆ. ಇದು ಭಗವದ್ಗೀತೆಯ ಯದಾಯದಾಹಿ ಧರ್ಮಸ್ಯ ಗ್ಲಾನಿಃ ಎಂಬ ಜನಪ್ರಿಯ ಶ್ಲೋಕದಲ್ಲಿ ದೃಢಪಟ್ಟಿದೆ. ‘‘ರ್ಮಗ್ಲಾನಿಯಾದಲೆಲ್ಲಾ ಹಾಗೂ ಅಧರ್ಮ ಹೆಚ್ಚಿದಾಗಲೆಲ್ಲಾ, ಎಲೈ ಅರ್ಜುನನೇ ನಾನು ಸ್ವತಃ ಅವತರಿಸುತ್ತೇನೆ.‘ (ಗೀತಾ ೪.೭)

No comments:

Post a Comment