Tuesday, 7 February 2017

ಪ್ರಭುಪಾದರ ವಾಣಿ


   ಆಧ್ಯಾತ್ಮಿಕ ಆತಂಕ ಎಂದರೆ, ನಿಮ್ಮ ಆಧ್ಯಾತ್ಮಿಕ ಜೀವನದಲ್ಲಿ ಮುನ್ನಡೆ. ಪ್ರಪಂಚಿಕ ಆತಂಕ ಎಂದರೆ, ನೀವು ಕೆಳಗಿಳಿಯುತ್ತಿದ್ದಿರಿ ಎಂದು. ಮಾಯೆ ಎಷ್ಟು ಪ್ರಬಲವಾಗಿದೆ ಎಂದರೆ ನಾನು ಒಂಟಿಯಾಗಿ ಒಂದು ಕಡೆ ಕುಳಿತ ತಕ್ಷಣ ನನ್ನ ಯೋಚನೆ ಹಣ ಮತ್ತು ಹೆಣ್ಣಿನ ಕಡೆಗೆ ಹೋಗುತ್ತದೆ. ಹಾಗಾಗಿ ಯಾವಗಲೂ ನಾವು ಭಕ್ತರ ಸಂಗದಲ್ಲಿರಬೇಕು ಮತ್ತು ಹರೇಕೃಷ್ಣ ನಾಮ ಜಪಿಸುತ್ತಿರಬೇಕು ಮತ್ತು ನಮ್ಮನು ನಾವು ಬೌತಿಕ ಪತನದ ಅಪಾಯದಿಂದ ರಕ್ಷಿಸಿಕೊಳ್ಳಬೇಕು.
_ಹವಾಯಿ, ಫೆಬ್ರವರಿ ೦೭, ೧೯೭೫_

ಭಗವದ್ಗೀತೆ ಅಧ್ಯಾಯ-2
ಗೀತಾ ಸಾರಸಂಗ್ರಹ

ಶ್ಲೋಕ - 21
ವೇದಾವಿನಾಶಿನಂ ನಿತ್ಯಂ
ಯ ಏನಮಜಮವ್ಯಯಮ್ ।
ಕಥಂ ಸ ಪುರುಷಃ ಪಾರ್ಥ
ಕಂ ಘಾತಯತಿ ಹಂತಿ ಕಮ್ ॥೨೧॥

ಹೇ ಪಾಥ೯, ಆತ್ಮವು ಅವಿನಾಶಿ; ನಿತ್ಯ. ಅದಕ್ಕೆ ಹುಟ್ಟಿಲ್ಲ, ಕ್ಷಯವಿಲ್ಲ ಎಂದು ತಿಳಿದವನು ಹೇಗೆ ಯಾರನ್ನಾದರೂ ಕೊಲ್ಲುವನು ಅಥವಾ ಕೊಲ್ಲಿಸುವನು?

No comments:

Post a Comment