Monday, 27 February 2017

ಪ್ರಭುಪಾದರವಾಣಿ,ಫೆಬ್ರವರಿ27

ಕೆಲವೊಮ್ಮೆ, ರಾಧಾರಾಣಿಯು ಹೊರಗೆ ಹೋದಾಗ, ಕೃಷ್ಣನು ಅವಳನ್ನು ಆಕ್ರಮಿಸಿ ಅವಳು ಬೀಳುವಂತೆ ಮಾಡುತ್ತಿದ್ದನು. ಆಗ ಅವಳು, "ನನಗೆ ಹೀಗೆ ತೊಂದರೆ ಕೊಡಬೇಡ" ಎಂದು ಕೃಷ್ಣನಲ್ಲಿ ಬೇಡಿಕೊಳ್ಳುತ್ತಿದ್ದಳು. ಅವರು ಕೆಳಗೆ ಬಿದ್ದಾಗ ಆ ಅವಕಾಶವನ್ನು ಉಪಯೋಗಿಸಿಕೊಂಡು ಕೃಷ್ಣ ರಾಧೆಗೆ ಮುತ್ತು ಕೊಡುತ್ತಿದ್ದನು. ರಾಧಾರಾಣಿಗೆ ಅದರಿಂದ ಸಂತೋಷವಾಗುತ್ತಿತ್ತು. ಕೃಷ್ಣನು ಬಾಹ್ಯವಾಗಿ ಎಲ್ಲರಿಗಿಂತ ದೊಡ್ಡ ವಂಚಕನೇ ಆಗಿದ್ದನು. ಅವನಲ್ಲಿ ಈ ಗುಣ ಇಲ್ಲದಿದ್ದರೆ ಅದು ಈ ಪ್ರಪಂಚದಲ್ಲಿ ಇರಲು ಹೇಗೆ ಸಾಧ್ಯ?  ನಮ್ಮ ಸೂತ್ರವೆಂದರೆ ಎಲ್ಲವೂ ಭಗವಂತನಲ್ಲಿ ಇದೆ ಎಂಬುದು ಆಗಿದೆ. ಆದರೆ  ಅವನ ಈ ಗುಣ ಎಷ್ಟು ಚೆನ್ನಾಗಿದೆ ಎಂದರೆ, ಎಲ್ಲರೂ ಅವನ ಈ ಗುಣವನ್ನು ಆರಾಧಿಸುತ್ತಾರೆ.

ಮಾಯಾಪುರ.
ಫೆಬ್ರವರಿ27, 1972

No comments:

Post a Comment